ಅಂದು - ಇಂದು
ನಶೆಯಾಗಿದೆ ನಿನ್ನ ಗೆಳೆತನ
ನೀ ಸೇರಿದೆ ನನ್ನ ತನು ಮನ
ವಿಶೇಷ ವಾದ ಈ ಮೊದಲ ಅನುಭವ
ಮಿತಿ ಮೀರಿದೆ ನೀನೇ ಬೇಕೆಂಬ ಹಂಬಲ
ಬಿಕೋ ಎನುತಿದೆ ನನ್ನೀ ಮನ
ನೀನಿರದಾ ಈ ಕ್ಷಣ
ನಿನ್ನ ಹಿಂದೆಯೇ ಸಾಗಿದೆ
ನನ್ನ ನಗು ಸಂತೋಷ
ಅಂದು ನೀ ನಿಡಿದಾ ಪತ್ರ
ನನ್ನ ಬಳಿಯೇ ಇದೆ ಆದರೆ
ಪ್ರೀತಿ ಯೆಂಬ ಚಿಲುಮೆ ಮಾಯವಾಗಿದೆ
ಒಲವೆಂಬ ಪದಗಳು ಮಾಸಿದೆ
ಸಾಕೆನಿಸುತ್ತಿದೆ ಆ ನಿನ್ನ ಗೆಳೆತನ
ಬೇಡವಾಗಿದೆ ಈ ತನು ಮನ
ಆದರು ಜೀವನವೆಂಬ ತೇರನ್ನು ಎಳೆಯುವೆ
ದೂರ ....ದೂರ ....ದೂರ
- ನಿರಂಜನ . ಮo .ಭಟ್
